ದೆಹಲಿ:- ಮೋದಿ ದೊಡ್ಡ ಮತಗಳ್ಳ. ಮತಗಳ್ಳರನ್ನು ಮೊದಲು ಓಡಿಸಬೇಕು. ಎಲ್ಲಿಯವರೆಗೆ ಬಿಜೆಪಿ ಅಧಿಕಾರದಲ್ಲಿರುತ್ತೋ ಅಲ್ಲಿಯವರೆಗೆ ಸಂವಿಧಾನ ಸುರಕ್ಷಿತವಾಗಿರಲ್ಲ, ಜನರ ಹಕ್ಕೂ ಸುರಕ್ಷಿತವಾಗಿರಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದರು.
ಬಿಹಾರದಲ್ಲಿ ಮತಪಟ್ಟಿ ಪರಿಷ್ಕರಣೆ ವಿರೋಧಿಸಿ ನಡೆದ ಸಮಾವೇಶದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ಅಧಿಕಾರದಲ್ಲಿರುವವರೆಗೂ ಸಂವಿಧಾನಕ್ಕೆ ಅಪಾಯ ತಪ್ಪಿದ್ದಲ್ಲ. ಈ ಮತಗಳ್ಳರನ್ನು ಮೊದಲು ಅಧಿಕಾರದಿಂದ ಕೆಳಗಿಳಿಸಬೇಕು ಎಂದಿದ್ದಾರೆ.
ಮೋದಿ ನಿಮ್ಮ ಮತಗಳನ್ನು ಕದಿಯುತ್ತಿದ್ದಾರೆ. ಯುವ ಜನರ ಉದ್ಯೋಗ ಕದಿಯುತ್ತಾರೆ. ಸಣ್ಣ ಉದ್ದಿಮೆದಾರರು, ರೈತರ ಉದ್ಯೋಗಗಳನ್ನು ಕಸಿಯುತ್ತಿದ್ದಾರೆ. ಅವರು ದೊಡ್ಡ ಕಳ್ಳ. ಅವರನ್ನು ಅಧಿಕಾರದಿಂದ ಕಿತ್ತು ಹಾಕಬೇಕು ಎಂದು ಖರ್ಗೆ ವಾಗ್ದಾಳಿ ನಡೆಸಿದ್ದರು.
Leave feedback about this