ಬೆಂಗಳೂರು:- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಬಿಪಿಎಲ್ ಕಾರ್ಡದಾರರಿಗೆ ಗುಡ್‌ನ್ಯೂಸ್ ಕೊಟ್ಟಿದ್ದು, ಉಚಿತ ಕಸಿ ಶಸ್ತ್ರಚಿಕಿತ್ಸೆ ಪಡೆಯಲು ಅವಕಾಶವನ್ನು ಕಲ್ಪಿಸುತ್ತಿದೆ.
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಯೋಜನೆಯಡಿ ಅವಕಾಶ
ಕರ್ನಾಟಕ ಸರ್ಕಾರದ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅಡಿಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಜನರು ಮೂತ್ರಪಿಂಡ, ಹೃದಯ,ಯಕೃತ್ ಮತ್ತು ಬಹು ಅಂಗಾಂಶ ವೈಫಲ್ಯದ ಚಿಕಿತ್ಸೆಗೆ ಉಚಿತ ತಜ್ಞ ಚಿಕಿತ್ಸೆಯನ್ನು ಪಡೆಯಬಹುದಾಗಿದೆ. ಸಾಮಾನ್ಯವಾಗಿ ₹2 ಲಕ್ಷದಿಂದ ₹22 ಲಕ್ಷದವರೆಗೆ ಖರ್ಚಾಗುವ ಈ ಚಿಕಿತ್ಸೆಗಳನ್ನ ಉಚಿತವಾಗಿ ನೀಡಲಾಗುತ್ತಿದ್ದು, ಅಗತ್ಯವಿರುವವರ ಬಳಕೆ ಮಾಡಿಕೊಳ್ಳುವಂತೆ ಸರ್ಕಾರ ತಿಳಿಸಿದೆ.
ಯಾವ ಚಿಕಿತ್ಸೆಗೆ ಎಷ್ಟು ಹಣ:- ಶ್ವಾಸಕೋಶ ಕಸಿಗೆ: ₹15 ಲಕ್ಷ, ಯಕೃತ್ ಕಸಿಗೆ: ₹11 ಲಕ್ಷ, ಹೃದಯ ಮತ್ತು ಶ್ವಾಸಕೋಶ ಕಸಿಗೆ: ₹22 ಲಕ್ಷ, ಮೂತ್ರಪಿಂಡ ಚಿಕಿತ್ಸೆಗೆ: ₹2 ಲಕ್ಷ,
ಈ ಚಿಕಿತ್ಸೆಯನ್ನು ಪಡೆಯುವುದು ಹೇಗೆ:’ಈ ಚಿಕಿತ್ಸೆಯನ್ನ ಪಡೆಯಲು ಮೊದಲು ನಿಮ್ಮ ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಹೋಗಿ ಅಥವಾ ಆಸ್ಪತ್ರೆಗೆ ಹೋಗಿ ಅಲ್ಲಿ ಬೇಕಾದ ದಾಖಲೆಗಳನ್ನ ಕೊಟ್ಟು ಚಿಕಿತ್ಸೆಯನ್ನ ಪಡೆಯಬಹುದು. ಇದಲ್ಲದೇ, ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಿ ಆನ್ಲೈನ್ ಮೂಲಕ ಫಾರ್ಮ್ ಅನ್ನು ಫಿಲ್ ಮಾಡಿ ಸಹ ಚಿಕಿತ್ಸೆ ಪಡೆಯಬಹುದಾಗಿದೆ.
ದಂತಭಾಗ್ಯ ಯೋಜನೆಯಲ್ಲಿ ಮಹತ್ತರ ಬದಲಾವಣೆ
ಈ ಹಿಂದೆ ರಾಜ್ಯ ಸರ್ಕಾರ ಆರೋಗ್ಯ ಇಲಾಖೆಯಲ್ಲಿ ಕೆಲ ಬದಲಾವಣೆ ಮಾಡಿದ್ದು, ಮುಖ್ಯವಾಗಿ ದರಗಳನ್ನ ಏರಿಕೆ ಮಾಡಿದೆ. ಇದೀಗ ಹಿರಿಯ ನಾಗರಿಕರಿಗೆ ಉಚಿತ ದಂತಪಂಕ್ತಿ ನೀಡುವ ಉದ್ದೇಶದಿಂದ ಆರಂಭಿಸಲಾದ ದಂತಭಾಗ್ಯ ಯೋಜನೆಯಲ್ಲಿ ಸಂಪೂರ್ಣ ದಂತಪಂಕ್ತಿಗಳ ದರ ಹೆಚ್ಚಿಸುವ ನಿರ್ಧಾರಕ್ಕೆ ಸರ್ಕಾರ ಬಂದಿದೆ.
ಈ ಬಗ್ಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು, ದಂತಭಾಗ್ಯ ಯೋಜನೆಯಲ್ಲಿ ಸಂಪೂರ್ಣ ದಂತಪಂಕ್ತಿ ಯೋಜನೆಯ ದರವನ್ನ 2 ಸಾವಿರದಿಂದ 3 ಸಾವಿರದ ವರೆಗೆ ಜಾಸ್ತಿ ಮಾಡಲಾಗಿದ್ದು, ಈ ಹೆಚ್ಚಳದಿಂದ ಉಂಟಾಗುವ ಹೆಚ್ಚುವರಿ ಮೊತ್ತವನ್ನ ಪ್ರಸ್ತಕ ಸಾಲಿನಲ್ಲಿ ಇಲಾಖೆಗೆ ನೀಡಲಾದ ಆಯವ್ಯಯದಲ್ಲಿ ಭರಿಸತಕ್ಕದ್ದು ಎಂದು ಸರ್ಕಾರ ಹೇಳಿತ್ತು.
Leave feedback about this