ಅಂತಾರಾಷ್ಟ್ರೀಯ ಇಂದಿನ ಪ್ರಮುಖ ಸುದ್ದಿಗಳು ಜೀವನ ಶೈಲಿ ಟ್ರೆಂಡಿಂಗ್ ಬೆಂಗಳೂರು ಸಾಮಾಜ ಸೇವೆ ಸ್ಪಾಟ್ಲೈಟ್ ಹೊಸ ವರ್ಗ

ನಿಗದಿಯಾಗುವ ಮೀಸಲಾತಿಯತ್ತ ಆಕಾಂಕ್ಷಿಗಳ ಚಿತ್ತ.!

ಬೆಂಗಳೂರು:- ಕಳೆದ ನಾಲ್ಕು ವರ್ಷಗಳಿಂದ ಜನ ಪ್ರತಿನಿಧಿಗಳಿಲ್ಲದೆ ಆಡಳಿತಾಧಿಕಾರಿಗಳಿಂದ ಆಡಳಿತ ನಡೆಯುತ್ತಿದೆ. ದಾರಿ ಅಡ್ಡದುಡ್ಡಲಾಗಿ ಸಾಗಿದೆ. ಇಂದು ಜನಪ್ರತಿನಿಧಿಗಳು ಜಾತಕಪಕ್ಷಿಯಂತೆ ಕಾಯುತ್ತಿದ್ದಾರೆ.
ಯೆಸ್… ಗೆಳೆಯರೆ ಸರ್ಕಾರ ಮನಸ್ಸು ಮಾಡಬೇಕಾಗಿದೆ, ಕಳೆದ ಬಿಜೆಪಿ ಸರ್ಕಾರ ಚುನಾವಣೆ ಹೇಗೊ ಮುಂದೆ ಹಾಕಿ ತನ್ನ ಮೇಲಿದ್ದ ಭಾರ ಇಳಿಸಿ ಕೊಂಡಿತ್ತು. ಹಾಲಿ ಕರ್ನಾಟಕದ ಕಾಂಗ್ರೆಸ್ ಸರ್ಕಾರ ದೇಶದ ಬೆನ್ನೆಲುಬಾದ ಗ್ರಾಮೀಣ ಪ್ರದೇಶಗಳ ಮತದಾನವೆಂಬ ಹಕ್ಕು ಸರ್ಕಾರದ ಮೇಲೆ ಚುನಾವಣಾ ಫಲಿತಾಂಶವಾಗಿ ಕೂತಿದೆ.! ಸಿದ್ಧತೆ ಆರಂಭಗೊಂಡಿದೆಯಾದರೂ ನ್ಯಾಯಾಲಯ ಕೇಳುವ ಪ್ರಶ್ನೆಗೆ ಉತ್ತರ ಕೊಡುತ್ತಾ ಸಾಗಿದೆ.!
ಜಿಲ್ಲಾ, ತಾಲ್ಲೂಕು ಪಂಚಾಯಿತಿಗಳಿಗೆ ಕ್ಷೇತ್ರವಾರು ನಿಗದಿಯಾಗುವ ಮೀಸಲಾತಿಯತ್ತ ಆಕಾಂಕ್ಷಿಗಳ ಚಿತ್ತ ಇತ್ತ ನೆಟ್ಟಿದ್ದು, ತಮ್ಮ ಅಥವಾ ಬೆಂಬಲಿಗರ ಸ್ಪರ್ಧೆಗೆ ಅನುಕೂಲವಾಗುವಂತೆ ಮೀಸಲು ನಿಗದಿಪಡಿಸುವ ಕುರಿತು ಸಚಿವರು, ಶಾಸಕರು, ಮಾಜಿ ಶಾಸಕರು, ಮುಖಂಡರು ಬೆನ್ನು ರಾಜ್ಯದ ಮುಖ್ಯಮಂತ್ರಿಯ ಬೆನ್ನು ಹತ್ತಿದ್ದಾರೆ.
ಜೂನ್ ತಿಂಗಳೊಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸು ವುದಾಗಿ ಒಪ್ಪಿಕೊಂಡಿರುವ ರಾಜ್ಯ ಸರ್ಕಾರ, ವಿಧಾನ ಮಂಡಲ ಅಧಿವೇಶನದ ಸಂದರ್ಭದಲ್ಲಿ ಶಾಸಕರು, ಸಚಿವರು ನೀಡುವ ಪಟ್ಟಿ ಯನ್ನು ಆಧರಿಸಿ ಮೀಸಲಾತಿ ನಿಗದಿಪಡಿಸುವುದು ಬಹುತೇಕ ಖಚಿತವಾಗಿರುವ ಕಾರಣ ಬೆಂಗಳೂರಿನತ್ತ ದೌಡಾಯಿಸಿರುವ ಮುಖಂ ಡರು, ಆಕಾಂಕ್ಷಿಗಳು ನಾಯಕರ ಮನವೊಲಿಕೆಯಲ್ಲಿ ತೊಡಗಿದ್ದಾರೆ. ಜಿ.ಪಂ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ ನಂತರ ಮುಂದಿನ ಅವಧಿಗೆ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ತೋರುವವರ ಸಂಖ್ಯೆ ಹೆಚ್ಚುತ್ತಿರುವ ಕಾರಣ ಬಹುತೇಕ ಹೊಸ ಮುಖಗಳಿಗೆ ಮಣೆ ಹಾಕಿ, ಹಳಬರನ್ನು ದೂರ ಇಡಲು ಅನುಕೂಲವಾಗುವಂತೆ ಶಾಸಕರು ಮೀಸಲಾತಿ ನಿಗದಿಪಡಿಸುವುದಕ್ಕೆ ಒಳಗೊಳಗೆ ಕರಾಮತ್ತು ನಡೆಸುತ್ತಿರುವ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಅನೇಕ ಮುಖಂಡರು ಸಚಿವರು, ಸಿಎಂ ಅವರ ಮೊರೆ ಹೋಗಿರುವುದು ಗಮನಾರ್ಹವಾಗಿದೆ.
2021ರಲ್ಲಿ ಅಧಿಕಾರದ ಅವಧಿ ಮುಗಿದರೂ ಈತನಕ ಚುನಾವಣೆ ನಡೆಯದ ಕಾರಣ ಹಿರಿಯ ಐಎಎಸ್ ಅಧಿಕಾರಿಗಳೇ ಜಿ.ಪಂ ಆಡಳಿ ತಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುವಂತಾಗಿದೆ.
ಚುನಾಯಿತ ಜನಪ್ರತಿನಿಧಿಗಳು ಇಲ್ಲದ ಕಾರಣ ಕೇಂದ್ರ ಸರ್ಕಾರ ಬಿಡುಗಡೆ ಮಾಡುತ್ತಿದ್ದ ಅನುದಾನಕ್ಕೂ ಕತ್ತರಿ ಬಿದ್ದಿದೆ. ಹಣಕಾಸು ಆಯೋಗದಿಂದ ಬಿಡುಗಡೆಯಾಗುತ್ತಿದ್ದ ಅನುದಾನದಲ್ಲಿ 24-25ನೇ ಸಾಲಿನ ಅನುದಾನ ವಾಪಸ್ ಪಡೆದಿದ್ದರೆ, ಜಲಜೀವನ್ ಮಿಷನ್‌ನಲ್ಲೂ ಕಡಿತ ಮಾಡಲಾಗಿದೆ. ಕೆಲವು ಯೋಜನೆಗಳ ಅನುದಾನವನ್ನು ಗ್ರಾ.ಪಂಗೆ ನೇರವಾಗಿ ಬಿಡುಗಡೆ ಮಾಡಿ ಜಿ.ಪಂಗೆ ನೀಡಿಲ್ಲ. ಚುನಾವಣೆ ನಡೆದು ಹೊಸ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದು ಕ್ರಿಯಾಯೋಜನೆ ರೂಪಿಸಿ ಒಪ್ಪಿಗೆ ಪಡೆದರೆ ಒಂದಿಷ್ಟು ಅನುಕೂಲವಾಗಲಿದೆ. ಒಂದು ವೇಳೆ ಕ್ರಿಯಾ ಯೋಜನೆ ರೂಪಿಸುವುದು ವಿಳಂಬವಾದರೆ ಮತ್ತಷ್ಟು ಹೊಡೆತ ಬೀಳಲಿದೆ.
ರಾಜಕೀಯದ ಮಹತ್ವ ಪಡೆದ ಜಿ.ಪಂ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿ ನಂತರ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣವನ್ನು ಪ್ರವೇಶಿಸಿರುವ ಹಲವಾರು ಮಹನೀಯರು ಇದ್ದಾರೆ. ಹೀಗಾಗಿ ಜಿಲ್ಲಾ ಪಂಚಾಯಿತಿ ಚುನಾವಣೆ ರಾಜಕೀಯವಾಗಿ ಅತ್ಯಂತ ಮಹತ್ವ ಪಡೆದಿದೆ.