ಇಂದಿನ ಪ್ರಮುಖ ಸುದ್ದಿಗಳು ಜೀವನ ಶೈಲಿ ಟ್ರೆಂಡಿಂಗ್ ಬಳ್ಳಾರಿ ಸಾಮಾಜ ಸೇವೆ ಸ್ಪಾಟ್ಲೈಟ್ ಹೊಸ ವರ್ಗ

Shakti Dubey: ಬನಾರಸ್‌ ಹಿಂದು ವಿವಿ ವಿದ್ಯಾರ್ಥಿನಿ, ಪೊಲೀಸಪ್ಪನ ಮಗಳು ದೇಶಕ್ಕೆ ನಂ.1

ವದೆಹಲಿ (ಏ.22): ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ನಾಗರಿಕ ಸೇವೆಗಳ ಪರೀಕ್ಷೆ 2024ರ ಅಂತಿಮ ಫಲಿತಾಂಶವನ್ನು ಮಂಗಳವಾರ ಪ್ರಕಟಿಸಿದ್ದು, ಪ್ರಯಾಗ್‌ರಾಜ್‌ನ ಶಕ್ತಿ ದುಬೆ ದೇಶಕ್ಕೆ ನಂ.1 ಸ್ಥಾನ ಪಡೆದುಕೊಂಡಿದ್ದಾರೆ. ಯುಪಿಎಸ್‌ಸಿ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ದುಬೆ ಅಲಹಾಬಾದ್ ವಿಶ್ವವಿದ್ಯಾಲಯದಿಂದ ಜೀವರಸಾಯನಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಅವರು ಪರೀಕ್ಷೆಗೆ ರಾಜ್ಯಶಾಸ್ತ್ರ ಮತ್ತು ಅಂತರರಾಷ್ಟ್ರೀಯ ಸಂಬಂಧಗಳನ್ನು ಐಚ್ಛಿಕ ವಿಷಯವಾಗಿ ಆರಿಸಿಕೊಂಡಿದ್ದರು.