ಚಿಕ್ಕಮಗಳೂರು

ಒಂದು ಕಾಲದ ಭತ್ತದ ಕಣಜ: ಸಸಿ ಮಡಿ ತಯಾರಿ ಕಾರ್ಯಕ್ಕೆ ಸಿದ್ಧತೆ

ಚಿಕ್ಕಮಗಳೂರು:- ಒಂದು ಕಾಲದಲ್ಲಿ ಭತ್ತದ ಕಣಜ ಎಂದು ಖ್ಯಾತಗಳಿಸಿದ ಜಿಲ್ಲೆಯ ನರಸಿಂಹರಾಜಪುರ ಇಂದು ಸಸಿ ಮಡಿ ತಯಾರಿ ಕಾರ್ಯ ಭರದಿಂದ ಸಾಗಿದೆ. ಈ ಬಾರಿ ಮಲೆನಾಡಿನಲ್ಲಿ ವಾಡಿಕೆಗಿಂತ ದುಪ್ಪಟ್ಟು ಮಳೆಯಾಗಿ ಕೊಳೆ ರೋಗ ಬರುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಅವಧಿಗೂ ಮುನ್ನವೇ ಮಲೆನಾಡಿನ ಭಾಗದಲ್ಲಿ ವರುಣನ ಅರ್ಭಟ ಅಧಿಕವಾಗಿ ರೈತರು ಸಸಿಮಡಿ ಕಾರ್ಯದಲ್ಲಿ ನಿರತರಾಗಿದ್ದು, ಅತೀ ಶೀಘ್ರವಾಗಿ ನಾಟಿ ಕಾರ್ಯ ಪ್ರಾರಂಭವಾಗಲಿದೆ.

ಈ ತಾಲೂಕು ಮೊದಲು ಭತ್ತದ ಕಣಜವೆಂದೇ ಪ್ರಸಿದ್ಧಿ ಪಡೆಯಿತು. ನಂತರದ ದಿನಗಳಲ್ಲಿ ಭತ್ತದ ಗದ್ದೆಗಳೆಲ್ಲ ರಬ್ಬರ್ ತೋಟಗಳಾಗಿವೆ. ಭತ್ತದ ಗದ್ದೆಗಲ್ಲಿ ರಬ್ಬರ್ ಮರಗಳು ಬೆಳೆದು ನಿಂತವು. ರಬ್ಬರ್ ಬೆಲೆ ಕಡಿಮೆಯಾಗಿ, ಇದೀಗ ಅಡಿಕೆಗೆ ಭಾರಿ ಬೆಲೆ ಏರಿಕೆಯಾದ ಪರಿಣಾಮ ಮತ್ತೆ ರಬ್ಬರ್ ಮರಗಳನ್ನು ಕಡಿದು, ಅಡಕೆ ಗಿಡಗಳನ್ನು ನೆಡಲಾರಂಭಿಸಿದರು. ತಾಲೂಕಿನಲ್ಲಿ ಹೆಚ್ಚಾಗಿ ಅಡಿಕೆ ಬೆಳೆಯಲಾಗುತ್ತಿದೆ. ಭತ್ತಕ್ಕೆ ಬೆಂಬಲ ಬೆಲೆ ಕಡಿಮೆ, ಕೂಲಿ ಕಾರ್ಮಿಕರ ಕೊರತೆ, ಅಲ್ಪಲಾಭದ ಸಮಸ್ಯೆಯಿಂದ ಭತ್ತದ ಬೆಳೆ ಬಗ್ಗೆ ರೈತರು ಆಸಕ್ತಿ ಕಡಿಮೆ ಮಾಡಿದ್ದಾರೆ. ಆದರೆ, ತಾಲೂಕಿನ ಕೆಲ ರೈತರು ಮನೆಗೆ ಬೇಕಾದಷ್ಟು ಮಾತ್ರ ಭತ್ತ ಬೆಳೆಯುತ್ತಿದ್ದಾರೆ. ಸರ್ಕಾರ ಭತ್ತಕ್ಕೆ ನೀಡುವ ಬೆಂಬಲ ಬೆಲೆ ಜಾಸ್ತಿ ಮಾಡಬೇಕೆಂಬುದು ರೈತರ ಒತ್ತಾಯ ಮಾಡಿದರೂ ಪ್ರಯೋಜನೆ ಕಾಣಲಿಲ್ಲ.

ಹಳ್ಳಗಳು ಭರ್ತಿಯಾಗಿ ಹರಿಯುತ್ತಿವೆ, ಕೆರೆಗಳು ತುಂಬಿವೆ. ಇದೇ ರೀತಿಯಾಗಿ ಮಳೆಯಾದರೆ ಅಡಕೆಗೆ ಕೊಳೆರೋಗ ಹಾಗೂ ಎಲೆಚುಕ್ಕಿ ರೋಗ ಕಾಣಿಸಿಕೊಳ್ಳಲಿದೆ. ಅಡಕೆಗೆ ಔಷಧ ಸಿಂಪಡಣೆ ಮಾಡಲೂ ಮಳೆ ಬಿಡುವು ನೀಡುತ್ತಿಲ್ಲ. ಕಳೆದ ವರ್ಷ ಈವೇಳೆಗೆ 463 ಮಿ.ಮೀ ಮಳೆಯಾಗಿತ್ತು. ಈ ಬಾರಿ ಇಲ್ಲಿಯವರೆಗೆ ಒಟ್ಟು 854.8 ಮಿ.ಮೀ ಮಳೆಯಾಗಿದೆ. ಅಂದರೆ ಕಳೆದ ಬಾರಿಗಿಂತ ಈ ಬಾರಿ ದುಪ್ಪಟ್ಟು ಮಳೆಯಾಗಿದೆ.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video