Uncategorized

ಕುರ್ಚಿ ಕಲಹಕ್ಕೆ ಖರ್ಗೆ ಡೈರೆಕ್ಟ್ ವಾರ್ನಿಂಗ್

ದೆಹಲಿ:- ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಪಕ್ಷದಲ್ಲಿ ಅಸಮಾಧಾನ ಕೇಳಿ ಬರುತ್ತಲೇ ಇದೆ. ಇದೀಗ ನಾಯಕತ್ವ ಬದಲಾವಣೆಯ ಬಗ್ಗೆ ಎರಡು ಬಣಗಳ ನಡುವೆ ನಡೆಯುತ್ತಿರುವ ಕಿತ್ತಾಟಕ್ಕೆ ಬ್ರೇಕ್ ಹಾಕುವಂತೆ ಶಾಸಕರಿಗೆ, ಸಚಿವರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ವಿಧಾನ ಸಭಾ ಚುನಾವಣೆಯಲ್ಲಿ ಪಂಚ ಗ್ಯಾರಂಟಿಗಳಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷದಲ್ಲಿ ಆರಂಭದಿಂದಲೂ ಕೂಡ ಸಿಎಂ ಸ್ಥಾನಕ್ಕೆ ಪೈಪೋಟಿ ನಡೆಯುತ್ತಲೇ ಇತ್ತು. ಆದರೆ, ಹೈಕಮಾಂಡ್ ಸೂಚನೆಯ ಮೇರೆಗೆ ಸಿಎಂ ಸ್ಥಾನ ಕೂಗು ಸ್ವಲ್ಪ ಕಡಿಮೆಯಾಗಿತ್ತು. ಆದರೆ, ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಿಕ್ಕೆ ಬಂದು ಎರಡು ವರ್ಷ ಪೂರೈಸಿದ್ದು, ಅದರಂತೆ ಅಧಿಕಾರ ಬದಲಾವಣೆಯಾಗಬೇಕು ಎಂದು ತಮ್ಮ ಪಕ್ಷದ ನಾಯಕರೇ ಪಟ್ಟು ಹಿಡಿದಿದ್ದಾರೆ, ಇವೆಲ್ಲದಕ್ಕೂ ಹೈಕಮಾಂಡ್ ಬ್ರೇಕ್ ಹಾಕಿದೆ.

ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಕೂಗು ಕೇಳಿ ಬರುತ್ತಿದ್ದಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಕ್ಲಾಸ್ ತೆಗೆದುಕೊಂಡಿದ್ದು, ಚುನಾವಣೆ ಪೂರ್ವ ಭರವಸೆಗಳನ್ನು ಈಡೇರಿಸುವುದು ಮತ್ತು ಉತ್ತಮ ಆಡಳಿತ ನೀಡುವುದು ಸರ್ಕಾರದ ಆದ್ಯತೆಯಾಗಬೇಕು. ಕುರ್ಚಿ ಕಲಹ ಮುಂದುವರೆದರೆ ಸರ್ಕಾರದ ಸ್ಥಿರತೆಗೆ ಧಕ್ಕೆಯಾಗುವ ಸಾಧ್ಯತೆ ಇದೆ. ಸಚಿವರು ಬಾಯಿ ಮುಚ್ಚಿಕೊಂಡು ಕೆಲಸ ಮಾಡಬೇಕು, ಇಲ್ಲದಿದ್ದರೆ ಸಂಪುಟದಿಂದ ಕಿತ್ತು ಹಾಕಲಾಗುವುದು ಎಂದು ಡೈರೆಕ್ಟ್ ಆಗಿ ವಾರ್ನಿಂಗ್ ನೀಡಿದ್ದಾರೆ.

ಅಷ್ಟೇ ಅಲ್ಲದೆ ನಾಯಕತ್ವ ಬದಲಾವಣೆಯ ಯಾರು ಮಾತನಾಡಬಾರದು. ಅದನ್ನು ಏನೇ ಇದ್ದರೂ ಹೈಕಮಾಂಡ್ ನೋಡಿಕೊಳ್ಳುತ್ತೆ, ಸುಮ್ಮನೆ ತಮ್ಮ ತಮ್ಮ ಕೆಲಸವನ್ನು ಮಾಡುವುದರ ಕಡೆ ಗಮನಕೊಡಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಅಷ್ಟೇ ಅಲ್ಲದೆ ಕಳೆದ ವಾರ ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಇಬ್ಬರಿಗೂ ಕಿವಿ ಮಾತು ಹೇಳಿದ್ದ ಮಲ್ಲಿಕಾರ್ಜುನ್ ಖರ್ಗೆ ಅವರು ಯಾರು ಏನೇ ಹೇಳಿದರೂ ಸದ್ಯ ನಾಯಕತ್ವ ಬದಲಾವಣೆ ಮಾಡುವುದಿಲ್ಲ ಎಂದು ಸೂಚನೆ ನೀಡಿದ್ದಾರೆ.

ಜೊತೆಗೆ ಚುನಾವಣೆಗೂ ಮುನ್ನ ನೀಡಿದ್ದ ಭರವಸೆಗಳನ್ನು ಈಡೇರಿಸುವ ಕಡೆ ಹಾಗೂ ಉತ್ತಮ ಅಧಿಕಾರ ನಡೆಸುವ ಕಡೆ ಗಮನ ಕೊಡಿ. ಪಕ್ಷದಲ್ಲೇ ಗುಂಪುಗಾರಿಕೆ, ಕಿತ್ತಾಟ ಹೆಚ್ಚಾದರೆ ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಐದು ವರ್ಷ ಉತ್ತಮ ಆಡಳಿತ ನಡೆಸಿ ಎಂದು ಖರ್ಗೆ ತಿಳಿ ಹೇಳಿದ್ದಾರೆ.

ಕಾರ್ನರ್ ಟಾಕ್: ಯಾವುದೋ ಒಂದು ಕಡೆಯಿಂದ ಖರ್ಗೆ ಸಾಹೇಬರು ರಾಜ್ಯ ರಾಜಕಾರಣಕ್ಕೆ ಎಂಟ್ರಿಕೊಟ್ಟು, ರಾಜ್ಯದ ಸಿಂಹಾಸನ ಅಲಂಕರಿಸುವ ಗಾಳಿ ಬೀಸತೊಡಗಿದೆ. ಈ ಹಿಂದೆ ಡಿಸಿಎಂ ಡಿಕೆಶಿ ಖರ್ಗೆಯವರಿಗೆ ಬ್ಯಾಟ್ ಬೀಸಿದ್ದು ಇನ್ನೂ ಯಾರು ಮರೆತಿಲ್ಲ, ತಾನು ಸಿಎಂ ಕುರ್ಚಿಯಲ್ಲಿ ಒಮ್ಮೆಯಾದರೂ ಕೂರಬೇಕೆನ್ನುವ ಆಸೆ ಹಿಂದಿನಿಂದಲೂ ಇದೆ. ಹಾಗಾಗಿ ಖರ್ಗೆ ಸಾಹೇಬರ ಚಿತ್ತ ಕರ್ನಾಟಕದತ್ತ ಎಂದು ವಿಮರ್ಶಕರು ಎಂದೋ ಅಂದುಕೊಂಡಿದ್ದಾರೆ.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video