ಚಿಕ್ಕಮಗಳೂರು

ಕೂಡಿಟ್ಟಿದ್ದು ಪರರಿಗೆ, ಕೊಟ್ಟಿದ್ದು ತನಗೆ.- ಪಿ.ಜೆ.ಅಂಟೋನಿ

ಚಿಕ್ಕಮಗಳೂರು:- ದಾನಿಗಳಿಂದಾಗಿ ಉತ್ತಮ ಸಮಾಜ ನಿರ್ಮಾಣವಾಗುತ್ತಿದೆ ಎಂದು ಪ್ರವಾಸಿ ಮಂದಿರ ರಸ್ತೆಯ ಸೈಂಟ್ ಜಾರ್ಜ್ ಜಾಕೋ ಬೈಟ್ ಚರ್ಚ್‌ನ ಫಾದರ್ ಎ.ಜೆ.ಜಾರ್ಜ್ ತಿಳಿಸಿದರು.

ಅವರು ಜಿಲ್ಲೆಯ ನರಸಿಂಹರಾಜಪುರದ ಪ್ರವಾಸಿ ಮಂದಿರದ ಸಮೀಪದ ಸೈಂಟ್ ಜಾರ್ಜ್ ಜಾಕೋ ಬೈಟ್ ಚರ್ಚಿನಲ್ಲಿ ದಾನಿಗಳಾದ ಉದ್ಯಮಿ ಗದ್ದೆಮನೆ ವಿಶ್ವನಾಥ ದಂಪತಿಗಳಿಗೆ ಸನ್ಮಾನಿಸಿ ಮಾತನಾಡಿ, ನಾನು ದೀಪ್ತಿ ಪ್ರೌಢ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದಾಗ ಉದ್ಯಮಿ ವಿಶ್ವನಾಥ ವಿದ್ಯಾರ್ಥಿಯಾಗಿದ್ದರು. ಈಗ ದೊಡ್ಡ ಉದ್ಯಮಿಯಾಗಿ ಬೆಳವಣಿಗೆ ಹೊಂದಿರುವುದಕ್ಕೆ ನನಗೆ ಹೆಮ್ಮೆಯಾಗಿದೆ. ತಾವು ದುಡಿದಿರುವ ಆದಾಯದಲ್ಲಿ ಸ್ವಲ್ಫ ಭಾಗವನ್ನು ತಮ್ಮ ಹುಟ್ಟೂರಿನ ಸರ್ಕಾರಿ ಶಾಲೆಗಳು, ದೇವಸ್ಥಾನ, ಚರ್ಚ್‌ಗಳಿಗೆ ನೀಡುತ್ತಿರುವುದು ಇತರರಿಗೆ ಮಾದರಿಯಾಗಿದೆ ಎಂದರು.

ಲಯನ್ಸ್ ಕ್ಲಬ್ ಅಧ್ಯಕ್ಷ ಪಿ.ಜೆ.ಆಂಟೋನಿ ಮಾತನಾಡಿ, ಕಳೆದ 12 ವರ್ಷಗಳಿಂದ ಉದ್ಯಮಿ ಗದ್ದೆಮನೆ ವಿಶ್ವನಾಥ್ ಅವರು ಸಮಾಜ ಸೇವೆ ಮಾಡುತ್ತಿದ್ದಾರೆ. ಶೃಂಗೇರಿ, ಕೊಪ್ಪ, ಎನ್.ಆರ್.ಪುರ ಹಾಗೂ ತೀರ್ಥಹಳ್ಳಿ ತಾಲೂಕಿನ 110 ಶಾಲೆಗಳ 7500 ಮಕ್ಕಳಿಗೆ ಶಾಲಾ ಪರಿಕರ ನೀಡಿದ್ದಾರೆ. ತಮ್ಮ ಹುಟ್ಟೂರನ್ನು ಮರೆಯದೆ ಸಮುದಾಯದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಇದು ಇತರರಿಗೆ ಮಾದರಿಯಾಗಿದ್ದಾರೆ. ಕೂಡಿಟ್ಟಿದ್ದು ಪರರಿಗೆ, ಕೊಟ್ಟಿದ್ದು ತನಗೆ ಎಂಬ ಗಾದೆಯಂತೆ ವಿಶ್ವನಾಥ್ ಅವರು ದಾನ ಮಾಡಿ ಸಮಾಜದ ಅಭಿವೃದ್ದಿಯಲ್ಲಿ ತಮ್ಮನ್ನು ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಸೈಂಟ್ ಜಾರ್ಜ್ ಜಾಕೋ ಬೈಟ್ ಚರ್ಚಿಗೆ ಆರ್ಥಿಕ ಸಹಾಯ ನೀಡಿದ ವಿಶ್ವನಾಥ್ ದಂಪತಿಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಕ್ರಿಶ್ಚಿಯನ್ ಕೌನ್ಸಿಲ್‌ನ ಮಾಜಿ ಸದಸ್ಯ ಎಂ.ಪಿ.ಸನ್ನಿ, ಜಾಕೋಬೈಟ್ ಚರ್ಚಿನ ಕಾರ್ಯದರ್ಶಿ ಫೌಲೋಸ್, ಸಹ ಕಾರ್ಯದರ್ಶಿ ಎಲ್ದೋ, ಖಜಾಂಚಿಗಳಾದ ಟಿ.ವಿ.ವಿಜಯನ್, ಜೇಮ್ಸ್ ಹಾಗೂ ದಾನಿ ವಿಶ್ವನಾಥ ಅವರ ಪತ್ನಿ ಜಿನಿ ವಿಶ್ವನಾಥ್, ಎಂ.ಪಿ.ಮನು ಇದ್ದರು.

ಇದಕ್ಕೂ ಮೊದಲು ದಾನಿ ವಿಶ್ವನಾಥ್ ದಂಪತಿಗಳು ಎಲ್.ಎಫ್ ಚರ್ಚ್, ಬಸ್ತಿಮಠದ ಸೈಂಟ್ ಮೇರಿಸ್ ಚರ್ಚ್‌ಗೆ ಭೇಟಿ ನೀಡಿ ಅಲ್ಲಿನ ಫಾದರ್ ಹಾಗೂ ಆಡಳಿತ ಮಂಡಳಿಯವರಿಗೆ ಆರ್ಥಿಕ ಸಹಾಯ ಮಾಡಿದರು.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video