ನವದೆಹಲಿ:- ಧರ್ಮಸ್ಥಳ ದೇಗುಲದ ಬಗ್ಗೆ ಹಾಗೂ ಧರ್ಮಾಧಿಕಾರಿ ಡಿ. ವಿರೇಂದ್ರ ಹೆಗ್ಗಡೆ ಮತ್ತವರ ಸೋದರ ಡಿ.ಹರ್ಷೇಂದ್ರ ಹೆಗಡೆಯವರ ಬಗ್ಗೆ ಯಾವುದೇ ಸುದ್ದಿ ಪ್ರಕಟಿಸಿದಂತೆ ವಿಧಿಸಲಾಗಿದ್ದ ನಿರ್ಬಂಧದ ತೆರವು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ.
ಥರ್ಡ್ ಐ ಎಂಬ ಯೂಟ್ಯೂಬ್ ಚಾನೆಲ್ ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಿದ್ದ ಅರ್ಜಿಯಲ್ಲಿ ಈ ಗ್ಯಾಗ್ ಆದೇಶವು ಪತ್ರಿಕಾ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯದ ಹರಣವಾಗಿದೆ ಎಂದು ವಾದಿಸಿತ್ತು.
ಪ್ರಕರಣವನ್ನು ವಿಚಾರಣೆಗೊಳಪಡಿಸಿದ ನ್ಯಾಯಾಲಯ ಮುಖ್ಯ ನ್ಯಾಯಮೂರ್ಗಿಗಳಾದ ಬಿ.ಆರ್.ಗವಾಯಿ ಮತ್ತು ವಿನೋದ್ ಚಂದ್ರನ್, ಜೋಯ್ಮಲ್ಯ ಬಾಗ್ಚಿ ಅವರ ಪೀಠವು ಈ ವಿಷಯದಲ್ಲಿ ಕರ್ನಾಟಕ ಹೈಕೋರ್ಟ್ ಅನ್ನು ಮೊದಲು ಸಂಪರ್ಕಿಸಿ ಬಳಿಕ ನಮ್ಮ ಬಳಿಗೆ ಬನ್ನಿ ಎಂದು ಯೂಟ್ಯೂಬರ್ ಪರ ವಕೀಲರಿಗೆ ಹೇಳಿದೆ.
ನಮ್ಮದೇ ದೇಶದ ಹೈಕೋರ್ಟ್ ಗಳ ಆಜ್ಞೆಯನ್ನು ನಾವು ತೆಗೆದುಹಾಕಲು ಸಾಧ್ಯವಿಲ್ಲ. ಹೀಗಾಗಿ ನೀವು ಮೊದಲು ಹೈಕೋರ್ಟ್ ನಲ್ಲಿ ನಿಮ್ಮ ಅರ್ಜಿ ಸಲ್ಲಿಸಿ, ಅಲ್ಲಿಯೂ ನ್ಯಾಯ ದೊರಕದೆಂದು ನೀವು ಭಾವಿಸಿದರೆ ಇಲ್ಲಿಗೆ ಬರಬಹುದು ಎಂದು ನ್ಯಾಯಾಧೀಶರು ಹೇಳಿದರು.
ಧರ್ಮಸ್ಥಳ ತೀರ್ಥ ಕ್ಷೇತ್ರವು ಪ್ರಭಾವಿ ಹಿಂದೂ ಯಾತ್ರಾಸ್ಥಳವಾಗಿದೆ. ಇಲ್ಲಿ ಹಲವರನ್ನು ಕೊಂದು ಹಾಕಿದ್ದೇನೆ ಎಂದು ವ್ಯಕ್ತಿಯೊಬ್ಬ ಶರಣಾಗಿದ್ದು ಆತ ತನಗೆ ಧರ್ಮಸ್ಥಳದ ಆಡಳಿತ ಮಂಡಳಿಯಿಂದ ಪ್ರಾಣ ಬೆದರಿಕೆಯಿದೆ ಎಂದು ಹೇಳಿದ್ದಾನೆ. ಈ ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾದ ಬಳಿಕವೇ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡಕ್ಕೆ ಪ್ರಕರಣವನ್ನು ವಹಿಸಿದೆ ಎಂದು ಥರ್ಡ್ ಐ ಯೂಟ್ಯೂಬ್ ಚಾನಲ್ ಪರ ವಕೀಲರು ವಾದಿಸಿದ್ದರು. ಅಲ್ಲದೇ, 9 ಸಾವಿರ ವಿಡಿಯೋ ಲಿಂಕ್ ಗಳನ್ನು ತೆಗೆದು ಹಾಕಲು ಹೇಳಿರುವುದು ಅತ್ಯಂತ ಘೋರವಾಗಿದೆ ಎಂದು ಉಲ್ಲೇಖಿಸಿದ್ದರು.
Leave feedback about this