ಬೆಂಗಳೂರು

ನಾವು ಇಂದಿನಿಂದಲೇ ತನು ಮನವನ್ನು ಪಕ್ಷಕ್ಕಾಗಿ ಅರ್ಪಿಸಿದರೆ 2029ಕ್ಕೆ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ.- ಡಿಕೆಶಿ

ಬೆಂಗಳೂರು:- ಜತೆಗೂಡುವುದು ಆರಂಭ, ಜತೆಗೂಡಿ ಕೆಲಸ ಮಾಡುವುದು ಪ್ರಗತಿ ಎನ್ನುವ ಮಾತನ್ನು ನಾನು ಪದೇ ಪದೇ ಹೇಳುತ್ತಿರುತ್ತೇನೆ. ನಾವು ಇಂದಿನಿಂದಲೇ ನಮ್ಮ ತನು ಮನವನ್ನು ಪಕ್ಷಕ್ಕಾಗಿ ಅರ್ಪಿಸಿದರೆ 2029ಕ್ಕೆ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬಹುದು. 2029ರಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದು ರಾಹುಲ್ ಗಾಂಧಿ ಅವರನ್ನು ಪ್ರಧಾನಮಂತ್ರಿಯನ್ನಾಗಿ ಮಾಡಬೇಕು ಎಂದು ಡಿಸಿಎಂ ಡಿ.ಕೆ ಶಿವಕುಮಾರ್‌ ಅವರು ಕರೆ ನೀಡಿದರು.

ನಮ್ಮ ಪಕ್ಷದ ಅನೇಕ ನಾಯಕರು ವಕೀಲರಲ್ಲ. ಆದರೆ, ಅವರ ಅನುಭವ ಈ ದೇಶದ ಅನೇಕ ಕಾನೂನು ರೂಪಿಸಿದೆ. ನಾವು ಮತ್ತೆ ಸಂವಿಧಾನ ರಕ್ಷಣೆಗಾಗಿ ಅಧಿಕಾರಕ್ಕೆ ಬರಬೇಕಿದೆ. ನಮ್ಮ ಪೀಳಿಗೆ, ಯುವಕರು ಈ ದೇಶದ ಸಂವಿಧಾನ ರಕ್ಷಣೆಯನ್ನು ಎದುರು ನೋಡುತ್ತಿದ್ದಾರೆ. ನಾನು ವಿದ್ಯಾರ್ಥಿ ನಾಯಕನಾಗಿ ರಾಜಕೀಯ ಆರಂಭಿಸಿದೆ. ಆರಂಭಿಕ ದಿನಗಳಲ್ಲಿ ಅನೇಕ ಸಂಕಷ್ಟಗಳನ್ನು ಎದುರಿಸಿದೆ.ಆ ಕಾಲದಲ್ಲಿ ನಮ್ಮ ಪಕ್ಷದ ನಾಯಕರು ನಮಗೆ ಪ್ರೋತ್ಸಾಹ ನೀಡಿದರು. ನಾವು ಸರಿಯಾದ ಅಜೆಂಡಾ ಇಟ್ಟುಕೊಂಡು ಬದ್ಧತೆಯಿಂದ ಶ್ರಮಿಸಿ, 2029ರಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದು ರಾಹುಲ್ ಗಾಂಧಿ ಅವರನ್ನು ಪ್ರಧಾನಮಂತ್ರಿಯನ್ನಾಗಿ ಮಾಡಬೇಕು ಎಂದರು.

ಈ ದೇಶಕ್ಕಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿರುವ ನಾಯಕರು ಅಥವಾ ಕುಟುಂಬ ಯಾವುದಾದರೂ ಇದ್ದರೆ ಅದು ಈ ಗಾಂಧಿ ಕುಟುಂಬ. ದೇಶದ ರಾಷ್ಟ್ರಪತಿಯಾಗಿದ್ದ ಅಬ್ದುಲ್ ಕಲಾಂ ಅವರು ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವಂತೆ ಸೋನಿಯಾ ಗಾಂಧಿ ಅವರಿಗೆ ಆಹ್ವಾನ ನೀಡಿದಾಗ, ಅವರು ನನಗೆ ಅಧಿಕಾರ ಸಿಗುವುದು ಮುಖ್ಯವಲ್ಲ, ಈ ದೇಶದ ಅತ್ಯುತ್ತಮ ಆರ್ಥಿಕ ತಜ್ಞ, ಅಲ್ಪಸಂಖ್ಯಾತ ಸಿಖ್ ಸಮುದಾಯದ ನಾಯಕ ಪ್ರಧಾನಮಂತ್ರಿಯಾಗಬೇಕು ಎಂದರು. ನಾವು ಪಂಚಾಯ್ತಿ ಹುದ್ದೆಯಿಂದ ಶಾಸಕ, ಸಚಿವ ಸ್ಥಾನವನ್ನು ತ್ಯಜಿಸಲು ಸಿದ್ಧವಿರುವುದಿಲ್ಲ. ಆದರೆ, ಸೋನಿಯಾ ಗಾಂಧಿ ಅವರು ಪ್ರಧಾನಮಂತ್ರಿ ಸ್ಥಾನವನ್ನೇ ತ್ಯಾಗ ಮಾಡಿದರು. ಇಂತಹ ತ್ಯಾಗ ಬೇರೆ ಯಾರಾದರೂ ಮಾಡಿದ್ದಾರಾ ಎಂದು ಪ್ರಶ್ನಿಸಿದರು.

ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹೆಜ್ಜೆ ಹಾಕಿದರು. ಕರ್ನಾಟಕದಲ್ಲಿ 24 ದಿನಗಳ ಕಾಲ ಪಾದಯಾತ್ರೆ ಮಾಡಿದರು. ಅವರು ಹೆಜ್ಜೆ ಇಟ್ಟ ಕ್ಷೇತ್ರಗಳಲ್ಲೆಲ್ಲಾ ಕಾಂಗ್ರೆಸ್ ಪಕ್ಷ ಗೆದ್ದು, ಕರ್ನಾಟಕದಲ್ಲಿ ಸರ್ಕಾರ ರಚಿಸಿದೆ. ಇದು ಅವರು ಕೊಟ್ಟಿರುವ ಶಕ್ತಿ. ರಾಹುಲ್ ಗಾಂಧಿ ಅವರು ನೀಡಿರುವ ಸಂದೇಶದಂತೆ ಪಕ್ಷದ ಕಾನೂನು ಘಟಕ ಪ್ರತಿ ಕ್ಷೇತ್ರ ಮಟ್ಟದವರೆಗೆ ರಚನೆಯಾಗಬೇಕು. ಪ್ರತಿ ಬೂತ್ ನಲ್ಲಿ ಮತದಾರರ ಪಟ್ಟಿ ಪರಿಶೀಲನೆ ಆಗಬೇಕು. ಪ್ರತಿ ಕಾರ್ಯಕರ್ತರು, ಎಲ್ಲಾ ಸಮುದಾಯಗಳನ್ನು ನಾವು ರಕ್ಷಣೆ ಮಾಡಬೇಕು. ಆಗ ಮಾತ್ರ ಕಾಂಗ್ರೆಸ್ ಹಾಗೂ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರಲು ಸಾಧ್ಯ ಎಂದು ಕರೆ ನೀಡಿದರು.

ಕಳೆದ ವರ್ಷ ಡಿಸೆಂಬರ್ 26 ರಂದು, ನಾವು ಮಹಾತ್ಮಾ ಗಾಂಧಿಜಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಶತಮಾನೋತ್ಸವವನ್ನು ಆಚರಣೆ ಮಾಡಿದೆವು. ಅದೇ ದಿನ ನಾವು ನಮ್ಮ ನಾಯಕ ಮನಮೋಹನ್ ಸಿಂಗ್ ಅವರನ್ನು ಕಳೆದುಕೊಂಡೆವು. ಈ ಕಾರ್ಯಕ್ರಮದ ಮೂಲಕ ನಾವು ಜೈ ಭೀಮ್, ಜೈ ಬಾಪು, ಜೈ ಸಂವಿಧಾನ ಎಂಬ ಸಂದೇಶ ನೀಡಿದೆವು. ಇದು ನಮ್ಮ ದೇಶಕ್ಕೆ ಕೊಟ್ಟ ಸಂದೇಶ ಎಂದರು.

ಸಂವಿಧಾನ ನಮ್ಮ ಜೀವನದ ಮೂಲಮಂತ್ರ ಎಂದು ನಂಬಿದ್ದೇವೆ, ಏಕತೆ, ಸಮಗ್ರತೆ ಹಾಗೂ ಸಮಾನತೆ ಸಂವಿಧಾನದ ಮೂಲ ಆಶಯ. ಆದರೆ, ಇಂದು ಈ ಆಶಯಗಳನ್ನು ದಮನ ಮಾಡಲಾಗುತ್ತಿದೆ. ಸಂವಿಧಾನವನ್ನು ಹತ್ತಿಕ್ಕಲು ಸಂಘಟಿತ ಪ್ರಯತ್ನ ನಡೆಯುತ್ತಿದೆ. ಈ ಷಡ್ಯಂತ್ರವನ್ನು ಮೆಟ್ಟಿ ನಿಂತು ಇವುಗಳ ರಕ್ಷಣೆಗೆ ನಾವು ಶ್ರಮಿಸಬೇಕು. ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ, ಇಂದು ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗನದಂತೆ ನಾವು ಮುಂದೆ ಸಾಗಬೇಕು. ದೇಶಕ್ಕೆ ಸ್ವಾತಂತ್ರ್ಯ ಹಾಗೂ ಸಂವಿಧಾನವನ್ನು ಕೊಟ್ಟ ಪಕ್ಷದ ಕಾರ್ಯಕರ್ತನಾಗಿರುವುದಕ್ಕೆ ನನಗೆ ಬಹಳ ಹೆಮ್ಮೆಯಿದೆ ಎಂದು ತಿಳಿಸಿದರು.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video