ಚಿಕ್ಕಮಗಳೂರು

ಬಾಳೆಹೊನ್ನೂರು: ಪತ್ರಿಕಾ ಭವನದ ಶಂಕುಸ್ಥಾಪನಾ ಸಮಾರಂಭ ಜು.27 ರಂದು ನಡೆಯಲಿದೆ

ಚಿಕ್ಕಮಗಳೂರು:- ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕು ಪತ್ರಕರ್ತರ ಸಂಘದ ಬಾಳೆಹೊನ್ನೂರಿನಲ್ಲಿ ನೂತನವಾಗಿ ನಿರ್ಮಿಸಲಿರುವ ಪತ್ರಿಕಾ ಭವನದ ಶಂಕುಸ್ಥಾಪನಾ ಸಮಾರಂಭವು ಬರುವ ಭಾನುವಾರ(27-07-2025) ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ ಎಂದು ಅಧ್ಯಕ್ಷರಾದ ಸಚಿನ್ ಕುಮಾರ್ ರವರು, ಕಾರ್ಯದರ್ಶಿ ನಾಗರಾಜ್ ಭಟ್ ಜಂಟಿಯಾಗಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಅಂದು ಕಾರ್ಯಕ್ರಮದ ದಿವ್ಯ ಸಾನಿಧ್ಯ ಹಾಗೂ ಪತ್ರಿಕಾ ಭವನದ ಶಂಕುಸ್ಥಾಪನೆಯನ್ನು ಶ್ರೀಮದ್ ರಂಭಾಪುರಿ ಪೀಠದ ಶ್ರೀಗಳು ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಸಚಿನ್ ಕುಮಾರ್ ವಹಿಸಲಿದ್ದಾರೆ. ಕಾರ್ಯಕ್ರಮ ಉದ್ಘಾಟನೆ ಶೃಂಗೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ರಾಜೇಗೌಡರು, ನೀಲಿನಕ್ಷೆ ಅನಾವರಣ ಮಾಜಿ ಸಚಿವರಾದ ಡಿ.ಎನ್.ಜೀವರಾಜ್, ಪತ್ರಿಕಾ ಭವನದ ಶಿಲಾನ್ಯಾಸ ಅನಾವರಣ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರವಿಚಂದ್ರರವರು, ಪ್ರತಿವರ್ಷದಂತೆ ಈ ವರ್ಷವೂ ಪತ್ರಕರ್ತರ ಮಕ್ಕಳಿಗೆ ವಿದ್ಯಾರ್ಥಿ ಪ್ರೋತ್ಸಾಹ ಧನಸಹಾಯ ಡಾ.ಕೆ.ಪಿ ಅಂಶುಮಂತ್ ಗೌಡ ನೀಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಡಾ.ಆರತಿಕೃಷ್ಣ, ಅನಿವಾಸಿ ಭಾರತೀಯ ಕರ್ನಾಟಕ ಸರ್ಕಾರದ ಉಪಾಧ್ಯಕ್ಷರು, ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಸುಧಾಕರ್ ಶೆಟ್ಟಿ, ಬಿ.ಎಸ್ ಆಶೀಶ್ ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿರುವರು.

ನ.ರಾ.ಪುರದ ಭಸ್ತಿಮಠ ಅತಿಶಯ ಕ್ಷೇತ್ರ “ಕ್ರಿಯಾಶೀಲ ಪತ್ರಕರ್ತ” ಪ್ರಶಸ್ತಿ ಬಾಳೆಹೊನ್ನೂರಿನ ನಾಗರಾಜ್ ಭಟ್ ಹಾಗೂ ಬಾಳೆಹೊನ್ನೂರು ಹಿರಿಯ ಪತ್ರಕರ್ತ ಬಿ.ಎಸ್ ಸುಧಾಕರ್ ರಾವ್ ನೆನಪಿನ “ಹಿರಿಯ ಪತ್ರಕರ್ತರ” ಪ್ರಶಸ್ತಿ ಪ್ರವೀಣ್ ಕುಮಾರ್ ರವರಿಗೆ ನೀಡಲಾಗುವುದು.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video