ವಿಜಯಪುರ:- ಯೂಟ್ಯೂಬ್ ಪತ್ರಕರ್ತ ಎಂಬ ವ್ಯಕ್ತಿಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಾನು ಏನು ಬೇಕಾದರೂ ಹೇಳಿದರೂ ನಡೆಯುತ್ತದೆ ಎಂಬ ನಿದರ್ಶನ ವಿಜಯಪುರ ಪಟ್ಟಣದ ಎಸ್.ಆರ್ ಕಾಲೋನಿಯಲ್ಲಿ ನಡೆದಿದೆ.
ಸಂಗೊಳ್ಳಿ ರಾಯಣ್ಣನ ಮೂರ್ತಿ ಅನಾವರಣ ಕಾರ್ಯಕ್ರಮಕ್ಕೆ ಬಂದಿದ್ದ ಯತ್ನಾಳ, ಮಾಧ್ಯಮಗಳಿಗೆ ಮುಸ್ಲಿಂ ಧರ್ಮದ ಹುಡುಗಿಯರ ಜೊತೆ ಮದುವೆ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡುತ್ತಿದ್ದರು ಈ ವೇಳೆ ಯೂಟ್ಯೂಬರ್ ಪತ್ರಕರ್ತ ಎಂದು ಹೇಳಿಕೊಂಡ ಮಹಮ್ಮದ್ ಎಂಬಾತ ಯತ್ನಾಳ್‌ಗೆ ಪ್ರಶ್ನೆ ಕೇಳಿದ್ದಾನೆ.
ನೀನು ಯಾರು ಎಂದು ಪ್ರಶ್ನಿಸಿದ ಯತ್ನಾಳ್‌ಗೆ, ಮೈ ನೇಮ್ ಈಸ್ ಮೊಹಮ್ಮದ್ ಎಂದು ಉತ್ತರಿಸುತ್ತಿದ್ದಂತೆ ಯತ್ನಾಳ ಕೋಪಗೊಂಡು ಗೆಟ್ ಔಟ್ ರಾಸ್ಕಲ್! ಎಂದು ಗುಡುಗಿದ್ದಾರೆ.
ಎಲ್ಲಿಂದಲೋ ಬರ್ತಾರೆ, ಯೂಟ್ಯೂಬ್ ಅಂತ ದಂಧೆ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಯತ್ನಾಳರು.
ಯೂಟ್ಯೂಬ್ ಪತ್ರಕರ್ತ ಎಂದ ವ್ಯಕ್ತಿಗೆ ಯತ್ನಾಳ್ ಹಿಗ್ಗಾಮುಗ್ಗ ಜಾಡಿಸಿದರೂ ಅಲ್ಲಿದ್ದ ಯಾವೊಬ್ಬ ಪತ್ರಕರ್ತರು ತಾನಾಯಿತು ತನ್ನ ಕೆಲಸವಾಗಿತೆಂದು ಏನೂ ತಿಳಿಯದ ಹಾಗೆ ಇದ್ದ ಘಟನೆ ಮಾತ್ರ ಶೋಚನೀಯವಾಗಿತ್ತು.
Leave feedback about this