ಶಿವಮೊಗ್ಗ

ಸಿಗಂದೂರು: ಚೌಡೇಶ್ವರಿ ದೇವಿಯ ಭಕ್ತರ ಸಂಖ್ಯೆ ಹೆಚ್ಚಳದಿಂದ ಜನಜಂಗುಳಿ

·ಶಿವಮೊಗ್ಗ:- ಬಹುಕೋಟಿ ವೆಚ್ಚದಲ್ಲಿ ನಿರ್ಮಿಸಲಾದ 2.44 ಕಿಲೋ ಮೀಟರ್ ಉದ್ದದ ಸಿಗಂದೂರು ಬ್ರಿಡ್ಜ್ ಇತ್ತೀಚೆಗೆ ಉದ್ಘಾಟನೆಯಾಗಿದೆ. ಅದರ ಬೆನ್ನಲ್ಲೆ ಚೌಡೇಶ್ವರಿ ದೇವಿ ಭಕ್ತರು ಆಗಮಿಸುವ ಸಂಖ್ಯೆ ಅಪಾರ ಪ್ರಮಾಣದಲ್ಲಿ ಹೆಚ್ಚಾಗಿದೆ. ಇದರ ಪರಿಣಾಮವೆಂಬಂತೆ ಪಾರ್ಕಿಂಗ್, ಜನ ಸಂಚಾರಕ್ಕೆ ಸಾಕಷ್ಟು ತೊಂದರೆ ಆಗಿದೆ.

ವಾಹನ ನಿಲ್ಲಿಸುವುದು ಒಂದು ಕಡೆಯಾದರೆ, ದೇವಸ್ಥಾನ ಇರುವುದು ಮತ್ತೊಂದು ಕಡೆ. ಈ ಜಡಿ ಮಳೆ ನಡುವೆ ಆಗಮಿಸಿದ್ದ ಭಕ್ತರು ಹೈರಾಣಾಗಿದ್ದಾರೆ. YES, ಈವರೆಗೆ ಸಿಗಂದೂರು ಚೌಡೇಶ್ವರಿ ದೇವಿ ನೋಡಲು ತೆರಳಿದವರು ಲಾಂಜ್ ಮೂಲಕ ನೇತ್ರಾವತಿ ನದಿಯಲ್ಲಿ ಮೇಲೆ ಹಾದು ಹೋಗಬೇಕಿತ್ತು. ಆಗಲೂ ಅಪಾರ ಜನ ಬರುತ್ತಿದ್ದರು, ಲಾಂಜ್ ಸಂಚಾರಕ್ಕೆ ಈಗ ಬ್ರೇಕ್ ಬಿದ್ದಿದೆ. 743 ಕೋಟಿ ರೂಪಾಯಿ ವೆಚ್ಚದಲ್ಲಿ 740 ಮೀಟರ್ ಉದ್ದದ ಕೇಬಲ್ ಬ್ರಿಡ್ಜ್ ನಿರ್ಮಿಸಲಾಗಿದೆ. ಇದು ಕರ್ನಾಟಕದ ಅತೀ ಉದ್ದದ ಬ್ರಿಡ್ಜ್ ಆಗಿದೆ. ಸೇತುವೆ ನೋಡಲು ಬರುವವರು, ಹೊಸ ಸೇತುವೆ ಮೇಲೆ ಖಾಸಗಿ ವಾಹನ ತರುವವರ ಸಂಖ್ಯೆ ಹೆಚ್ಚಾಗಿದೆ. ಬ್ರಿಡ್ಜ್ ಮೇಲೆ ನಿಂತು ಫೋಟೋ ತೆಗೆದು ಭಕ್ತರು ಖಷಿ ಪಡೆಯುತ್ತಿದ್ದಾರೆ. ಇದು ಸಹಜ ಕೂಡ. ಸಾರ್ವಜನಿಕ ಸಾರಿಗೆ ಬಸ್ ಗಳಿಂದ ಸಿಗಂದೂರಿಗೆ ವಿಶೇಷ ಟೂರ್ ಪ್ಯಾಕೇಜ್ ಘೋಷಣೆ ಆಗಿದೆ.

ಚೌಡೇಶ್ವರಿ ದೇವಸ್ಥಾನಕ್ಕೆ ನೇರ ಸಾರಿಗೆ ಸಂಪರ್ಕ ಸಾಧ್ಯವಾದ ಬೆನ್ನಲ್ಲೆ ಇಲ್ಲಿಗೆ ಬರುವವರು ಸಂಖ್ಯೆ ಹೆಚ್ಚಾಗಿದೆ. ಒಂದು ಕಿಲೋ ಮೀಟರ್ ದೂರದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಿ ಬಂದರೂ ಸಹಿತ ಜನದಟ್ಟಣೆ ಜಾಸ್ತಿಯೇ ಇದೆ. ರಸ್ತೆಯುದ್ದಕ್ಕೂ ವಾಹನಗಳು ನಿಂತಿವೆ. ಜಡಿ ಮಳೆಯಲ್ಲಿ ಜನರು ತುಂಬಿ ತುಳುಕುತ್ತಿದ್ದಾರೆ. ಯಾರಾದರೂ ಇಲ್ಲಿಗೆ ಬರುವ ಪ್ಲಾನ್ ಮಾಡಿದ್ದರೆ ಮುಂದಿನ ಎರಡು ತಿಂಗಳ ಬರದಂತೆ ವ್ಯಕ್ತಿಯೊಬ್ಬರು ವಿಡಿಯೋ ಮಾಡಿ ಮನವಿ ಮಾಡಿದ್ದಾರೆ.

ವಿಡಿಯೋದಲ್ಲಿ ಜನಜಂಗಳಿ, ವಾಹನ ದಟ್ಟಣೆ ಹಾಗೂ ಗುಂಪಾಗಿ ನಿಲ್ಲಿಸಿದ ವಾಹನಗಳು ವೈರಲ್ ಆಗಿವೆ. ಇಲ್ಲಿಗೆ ಸದ್ಯಕ್ಕೆ ಯಾರು ಬರಬೇಡಿ, ಸರಿಯಾದ ವ್ಯವಸ್ಥೆ ಇಲ್ಲದಂತಾಗಿದೆ. ಅವ್ಯವಸ್ಥೆ ಜೊತೆಗೆ ದೇವಿಯ ದರ್ಶನಕ್ಕೆ ಕಿಲೋ ಮೀಟರ್ ದೂರದಲ್ಲಿ ವಾಹನ ನಿಲ್ಲಿಸಿ ಬರಬೇಕು. ಒಂದೇ ಸಮನೆ ಮಳೆ ಬರುತ್ತಿದೆ. ಯಾರಾದರೂ ಸಿಗಂದೂರಿಗೆ ಬರುವ ಪ್ಲಾನ್ ಮಾಡಿದ್ದರೆ ಮುಂದೂಡಿದರೆ ಒಳಿತು ಎಂದು ಮನವಿ ಮಾಡಿರುವ ಈ ವಿಡಿಯೋ ವೈರಲ್ ಆಗುತ್ತಿದೆ.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video